ಆನೆಗುಡ್ಡೆಗೆ ನಟಿ ಮಾಲಾಶ್ರೀ ಭೇಟಿ ವಿಶೇಷ ಪೂಜೆ
ಕುಂಭಾಸಿ: ಕನ್ನಡ ಚಲನಚಿತ್ರರಂಗದ ಮೇರು ನಟಿ ಮಾಲಾಶ್ರೀ ಅವರು ಕುಟುಂಬ ಸಮೇತ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ದೇವಳದ ಆಡಳಿತ ಅನುವಂಶಿಕ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು ಸ್ವಾಗತಿಸಿ, ದೇವಳದ ವತಿಯಿಂದ ಗೌರವಿಸಿದರು.

ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರು ಶ್ರೀ ದೇವರ ವಿಶೇಷ ಪ್ರಸಾದ ನೀಡಿ ಆಶೀರ್ವದಿಸಿದರು.
ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಹಾಗೂ ಕುಟುಂಬಸ್ಥರು, ದೇವಳದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.




